ವರ್ಬಿನೇಸೀ ಕುಟುಂಬದ ವೈಟೆಕ್ಸನಿಗುಂಡು ಪ್ರಭೇದದ ಸಸ್ಯ (ಜೆಸ್ಟ್‍ಟ್ರೀ). ಪೊದೆಯಂತೆ 3-4 ಮೀ. ಎತ್ತರ ಬೆಳೆಯುತ್ತದೆ. ಎಲೆಗಳು ಸಂಯುಕ್ತ ಮಾದರಿಯವು. 3-5 ಮರಿ ಎಲೆಗಳಿವೆ. ತಳಭಾಗದಲ್ಲಿ ಬೆಳ್ಳಿಯಂತೆ ಹೊಳೆಯುವ ಕೂದಲಿರುವ ಹೊರಮೈ ಉಂಟು. ಹೂಗೊಂಚಲು ಸಂಕೀರ್ಣ ಪುಷ್ಪಗುಚ್ಛ ಮಾದರಿಯಲ್ಲಿದೆ. ಪುಷ್ಪ ಪಾತ್ರೆಯಲ್ಲಿ 5 ಎಸಳುಗಳೂ 5 ದಳಗಳೂ ಇದ್ದು ಅವು ಒಟ್ಟಿಗೆ ಸೇರಿ ಕೊಳವೆಯಾಕಾರ ತಳೆಯುತ್ತವೆ. ಕೇಸರಗಳ ಸಂಖ್ಯೆ 4. ದಳಗಳ ಒಳಭಾಗಕ್ಕೆ ಅಂಟಿಕೊಂಡಿರುತ್ತವೆ. ಡಿಸೆಂಬರಿನಿಂದ ಏಪ್ರಿಲ್ ತನಕ ಹೂಬಿಡುವ ಈ ಗಿಡಗಳಲ್ಲಿ, ಜನವರಿಯಿಂದ ಜುಲೈ ತನಕ ಹಣ್ಣುಗಳು ಬೆಳೆಯುತ್ತವೆ. ಸಾಮಾನ್ಯವಾಗಿ ಮೈದಾನ ಮತ್ತು ಘಟ್ಟ ಪ್ರದೇಶಗಳಲ್ಲಿಯ ಬೆಳೆ ಇದು.						
	(ಟಿ.ಎಮ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ